ಇರಗೊಡಿಸು iragoḍsu to allow to be; 2. to allow to settle (at one place); ಇರಗೊಡು iragoḍu to allow to be; 2. to allow to settle (at one place); ಇರಮಾಡು iramāḍu to cause to be; 2. to cause to be settled (at one place); ಇರಸಲ್ಲ irasalla not fit to be; not fit to be settled (at one place); ಇರಹವಂ irahavam he who is (as so and so); 2. he who is settled (at some place); ಇರುವವ iruvava he who is (as so and so); 2. a person or nation with relatively much wealth or rich resources; a have; ಇದ್ದಕ್ಕಿದ್ದಂತೆ iddakkiddante as it is; without any change; 2. suddenly; at once; 3. without preparation; abruptly; ಇದ್ದಕ್ಕಿದ್ದ ಹಾಗೆ iddakkidda hāge = ಇದ್ದಕ್ಕಿದ್ದಂತೆ; ಇದ್ದರೆ iddare if (it is) so; 2. if available; ಇದೆಲ್ಲಾ/ಇವೆಲ್ಲಾ ಇದ್ದದ್ದೇ idellalā/ivellā iddaddē (saying) 'that bad things happen, and there is nothing one can do to prevent them, so it is not worth becoming upset about them'; ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಸಿದ್ದಪ್ಪನಿಗೆ ಸಿಡಿಲು ಬಡೀತು iddaddannu idda hāge hēḷidare siddappanige siḍilu baḍītu (prov.) hard fact is difficult to digest; ಇದ್ದದ್ದು ಇದ್ದ ಹಾಗೆ ಹೇಳಿದರೆ ಎದ್ದುಬಂದು ಎದಗೆ ಒದೆ iddaddu idda hāge hēḷidare eddubandu edege ode (prov.) a truth-teller finds the door closed against him; ಇದ್ದದ್ದು ಹೇಳಿದರೆ ಹದ್ದಿನಂತೆ ಮೋರೆಯಾಗು iddaddu hēḷidare haddinahāge mōreyāgu (prov.) = ಇದ್ದದ್ದು ಇದ್ದ ಹಾಗೆ ಹೇಳಿದರೆ ಎದ್ದುಬಂದು ಎದಗೆ ಒದೆ; ಇದ್ದದ್ದು ಹೋಯಿತು ಮದ್ದಿನ ಗುಣ iddaddu hōyitu maddina guṇa (prov.) striving to make (something) better, we oft mar what is well; ಇದ್ದಲ್ಲಿ ಗೌಡ, ಹೋದಲ್ಲಿ ಕಿವುಡ idalli gauḍa, hōdalli kivuda (prov.) every dog is a lion at home; ಇದ್ದವರು ಮೂವರಲ್ಲಿ ಕದ್ದವರು ಯಾರು? iddavaru mūvaralli kaddavaru yāru (prov.) all are good maids, but where come the bad wives; ಇದ್ದಮಕ್ಕಳಿಗೇ ಕೂಳಿಲ್ಲ, ಮತ್ತೊಂದು ಕೊಡೋ ಶಿವರಾಯ iddamakkaḷigē kūḷilla, mattondu koḍō śivarāya (prov.) pray for more difficulties; ಇದ್ದಾಗ ಹಿರಿ ಹಬ್ಬ, ಇಲ್ಲದಾಗ ಕಿರಿ ಹಬ್ಬ iddāga hiri habba, illadāga kiri habba (prov.) = ಇದ್ದಾಗ ಹಿರಿಯಣ್ಣ, ಇಲ್ಲದಾಗ ತಿರಿಯಣ್ಣ; ಇದ್ದಾಗ ಹಿರಿಯಣ್ಣ, ಇಲ್ಲದಾಗ ತಿರಿಯಣ್ಣ iddāga hiriyaṇṇa, illadāga kiryaṇṇa (prov.) prudent is he not who saves not for tomorrow; ಇದ್ದಾಗ ನವಾಬ ಸಾಹೇಬ, ಇಲ್ಲದಾಗ ಫಕೀರಸಾಹೇಬ iddāga navāba sāhēba, illadāga phakīra sāhēba (prov.) = ಇದ್ದಾಗ ಹಿರಿಯಣ್ಣ, ಇಲ್ಲದಾಗ ತಿರಿಯಣ್ಣ; ಇದ್ದಿದ್ದೊಂದಿಷ್ಟು ಇಲಿ ಕಚ್ಚಿಕೊಂಡು ಹೋಯಿತು iddiddondiṣṭu ili kaccikoṇḍu hōyitu (prov.) misfortune led to lose whatever little one had; ಇದ್ದವನು ಮಾಡಿದರೆ ವ್ಯವಹಾರ, ಇಲ್ಲದವನು ಮಾಡಿದರೆ ವ್ಯಭಿಚಾರ iddavanu māḍidare vyavahāra, illadavanu māḍidare vyabhicāra (prov.) money covers the misdeeds; ಇರಲಾರದೆ ಇರುವೆ ಬಿಟ್ಟುಕೊಂಡ iralārade iruve biṭṭukoṇḍa (prov.) to invite trouble deliberately or mischievously; ಇರುವವಳು ಇಟ್ಟುಕೊಂಡರೆ, ಇಲ್ಲದವಳಿಗೆ ಮುಲುಕಾಟ iruvavaḷu iṭṭukoṇḍare illadavaḷige mulukāṭa (prov.) envy burns from within; ಇಲ್ಲದವರಿಗೆ ಒಂದು ಚಿಂತೆ ಇದ್ದವರಿಗೆ ನೂರಾರು ಚಿಂತೆ illadavarige ondu cinte, iddavarige nūrāru cinte (prov.) poor worries only about his not having money, while rich has hundred worries about the money he has.